NUTRICORP AGRI NEWS

ಬೆಂಗಳೂರಿನಲ್ಲಿ ನ್ಯೂಟ್ರಿಕಾರ್ಪ್ ಅಗ್ರಿ ಸಂಸ್ಥೆಯ ಸಾವಯವ ಗೊಬ್ಬರ ಬಿಡುಗಡೆ

16 October 2026

Published by Prajavani.net

ಬೆಂಗಳೂರಿನಲ್ಲಿ ನ್ಯೂಟ್ರಿಕಾರ್ಪ್ ಅಗ್ರಿ ಸಂಸ್ಥೆಯ ಸಾವಯವ ಗೊಬ್ಬರ ಬಿಡುಗಡೆ — newspaper clipping

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಗ್ರಿ ಇನ್ನೋವೇಶನ್ ಸೆಂಟರ್‌ ಮಾರ್ಗದರ್ಶನದಲ್ಲಿ ನ್ಯೂಟ್ರಿಕಾರ್ಪ್ ಅಗ್ರಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಸಾವಯವ ಗೊಬ್ಬರವನ್ನು ನಗರದಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು.

ಶೇ 100ರಷ್ಟು ಬಯೋಚಾರ್ ಆಧಾರಿತ, ಶೇ 45ರಿಂದ 50ರಷ್ಟು ಸಾವಯವ ಇಂಗಾಲ ಹೊಂದಿರುವ ಈ ಗೊಬ್ಬರವನ್ನು ವಿಶ್ವವಿದ್ಯಾಲಯದ ಕುಲಪತಿ ಎಸ್‌.ವಿ. ಸುರೇಶ್ ಅವರು ಬಿಡುಗಡೆ ಮಾಡಿ, ಮಾತನಾಡಿದರು.  'ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಮತ್ತು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಉತ್ಪನ್ನವನ್ನು ಅಭಿವೃದ್ಧಿಪಡಿಸಲಾಗಿದೆ' ಎಂದು ಹೇಳಿದರು. ಈ ಸಂದರ್ಭದಲ್ಲಿ ಮೂಡಲಗಿರಿಯಪ್ಪ, ಉಮಾಶಂಕರ್, ಅಗ್ರಿ ಇನ್‌ಕ್ಯುಬೇಷನ್ ಸೆಂಟರ್‌ನ ಸಂಯೋಜಕರಾದ ವೀಣಾ ಎಸ್. ಅನಿಲ್ ಹಾಗೂ ನ್ಯೂಟ್ರಿಕಾರ್ಪ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಜೇಯ್ ಜಿ. ಉಪಸ್ಥಿತರಿದ್ದರು.